‘ಕಿಡ್ನಾಪ್‌ ಪ್ರಕರಣ’, ಬಂಧನಕ್ಕೊಳಗಾದ ಆರ್‌ಸಿಬಿ ತಂಡದ ಮಾಜಿ ಬ್ಯಾಟ್ಸ್ ಮನ್‌

(ನ್ಯೂಸ್ ಕಡಬ)newskadab.com  ಬೆಂಗಳೂರು, ಜ.18. ಭಾರತ ಕಿರಿಯರ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿಜಯ್‌ ಝೋಲ್‌ ಮತ್ತು ಆತನ ಸಹೋದರ ಸೇರಿದಂತೆ ಒಟ್ಟು 20 ಮಂದಿಯನ್ನು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಅಪಹರಣ, ಸುಲಿಗೆ ಮತ್ತು ದಂಧೆ ಪ್ರಕರಣಗಳ ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕ್ರಿಪ್ಟೊ ಕರೆನ್ಸಿ ಇನ್ವೆಸ್ಟ್‌ಮೆಂಟ್‌ ಮ್ಯಾನೇಜರ್‌ ಒಬ್ಬರು ದಾಖಲಿಸಿದ್ದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಷ್ಟೇ ಅಲ್ಲದೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲೂ ವಿಜಯ್‌ ಝೋಲ್ ಮತ್ತು ಆತನ ಸಹೋದರ ವಿಕ್ರಮ್‌ ಝೋಲ್‌ ಅವರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ. ಇವರ ಇಬ್ಬರ ವಿರುದ್ಧವೂ ದೂರು ದಾಖಲಾಗಿತ್ತು. ಅಪರಾದ ಸಂಜು ನಡೆಸಿ ತಮ್ಮ ಸಂಸ್ತೇಯ ಹಲವು ಗ್ರಾಹಕರಿಗೆ ಲಕ್ಷಾಂತರ ರೂ.ಗಳ ಮೋಸ ಮಾಡಿದ್ದಾರೆ ಎಂದು ಕ್ರಿಪ್ಟೊ ಕರೆನ್ಸಿ ಸಂಸ್ಥೆಯ ಮ್ಯಾನೇಜರ್‌ ತಮ್ಮ ದೂರು ನೀಡಿದ್ದರು.

Also Read  'ಶಾಶ್ವತವಾಗಿ ನನ್ನನ್ನು ಅನರ್ಹಗೊಳಿಸಿದರೂ ಯಾರಿಗೂ ಹೆದರಲ್ಲ'     ➤  ರಾಹುಲ್ ಮೊದಲ ಪ್ರತಿಕ್ರಿಯೆ..!     

 

error: Content is protected !!
Scroll to Top