(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಜ.14. ಕೇರಳ ಸರ್ಕಾರವು ಮೊಟ್ಟೆ ಬಳಸಿ ಮಾಡುವ ‘ಮಯೋನೆಸ್’ ನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಆಹಾರ ವಿಷಪೂರಿತಗೊಂಡ ಪ್ರಕರಣಗಳ ಹೆಚ್ಚಳದ ಹಿನ್ನೆಲೆ ಕೇರಳ ಸರ್ಕಾರ ಎಲ್ಲಾ ಹೋಟೆಲ್‌ಗಳಲ್ಲಿ ಮೊಟ್ಟೆಯಿಂದ ತಯಾರಿಸಿದ ಮಯೋನೆಸ್ ನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ. ಕಳೆದ ಎರಡು ವಾರಗಳಲ್ಲಿ ರಾಜ್ಯಾದ್ಯಂತ ಕನಿಷ್ಠ ಎರಡು ಡಜನ್ ಶಂಕಿತ ಪುಡ್ ಪಾಯಿಸನಿಂಗ್ ಪ್ರಕರಣಗಳು ವರದಿಯಾಗಿವೆ, ಕೆಲವು ಮಯೋನೆಸ್ ಸೇವನೆಯಿಂದಾಗಿ ಉಂಟಾಗಿದೆ.
ಸರಿಯಾಗಿ ಸಂಗ್ರಹಿಸದ ಮೇಯನೇಸ್ ಬ್ಯಾಕ್ಟೀರಿಯಾದ ತಾಣವಾಗಿರಬಹುದು ಎಂದು ಆಹಾರ ತಜ್ಞರು ಹೇಳಿದ್ದಾರೆ. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸುವ ಹಸಿ ಮೊಟ್ಟೆಯ ಬಿಳಿಭಾಗವು ಹಳೆಯದಾದರೆ, ಅವು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಉತ್ಪಾದಿಸಲು ಪ್ರಾರಂಭಿಸುತ್ತವೆ ಎಂದು ಅವರು ಹೇಳಿದರು. ಇನ್ನು ಎಲ್ಲಾ ಆಹಾರ ಪೊಟ್ಟಣಗಳ ಮೇಲೆ ಆಹಾರ ತಯಾರಿಸುವ ದಿನಾಂಕ ಮತ್ತು ವಿತರಣೆಯ ಸಮಯ ಮತ್ತು ಅದರ ಬಳಕೆ ಯೋಗ್ಯವಾದ ದಿನಾಂಕವನ್ನು ನಮೂದಿಸುವುದು ಕೂಡ ಕಡ್ಡಾಯವಾಗಿದೆ ಎಂದು ವರದಿ ತಿಳಿಸಿದೆ.