ಕರುವಿನ ಮೇಲೆಯೇ ಅತ್ಯಾಚಾರ ಎಸಗಿದ ಕಾಮುಕ ಶಫೀ ಉಲ್ಲಾ ಅರೆಸ್ಟ್..!!

(ನ್ಯೂಸ್ ಕಡಬ) newskadaba.com ಕೋಲಾರ, ಜ.11.   ಕಾಮುಕನೊಬ್ಬ ಕರುವಿನ ಮೇಲೆ ಕೀಚಕತನ ಮೆರೆದಿರುವ ವಿಲಕ್ಷಣ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಗ್ರಾಮದಲ್ಲಿ ಜಿಲ್ಲೆಯಲ್ಲಿ ವರದಿಯಾಗಿದೆ.

ಆರೋಪಿಯನ್ನು ಶಫೀ ಉಲ್ಲಾ ಎಂದು ಗುರುತಿಸಲಾಗಿದೆ.

ರಾಮರೆಡ್ಡಿ ಎಂಬುವವರಿಗೆ ಸೇರಿದ ಕರುವಿನ  ಮೇಲೆ ಶಫೀ ಉಲ್ಲಾ ಎನ್ನುವ ಕಾಮುಕ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.  ಈ ಹಿಂದೆ ಹಸುವಿನ ಮೇಲೆ ಅತ್ಯಾಚಾರ ಎಸಗಿದ್ದ ಶಫೀ ಉಲ್ಲಾ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದ. ಆ ವೇಳೆ ಗ್ರಾಮಸ್ಥರೇ ಬೈದು ಬುದ್ಧಿ ಹೇಳಿ ಸುಮ್ಮನಾಗಿದ್ದರು. ಆದ್ರೆ, ಕಾಮುಕ ಶಫೀ ಉಲ್ಲಾ ಮತ್ತೆ ತಮ್ಮ ಹಳೇ ಚಾಳಿ ಮುಂದುವರೆಸಿದ್ದಾನೆ ಎನ್ನಲಾಗಿದೆ. ಇದರಿಂದ ಗ್ರಾಮಸ್ಥರು ಈ ಬಾರಿ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಬೇತಮಂಗಲ ಪೊಲೀಸರು ಶಫೀ ಉಲ್ಲಾನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!

Join the Group

Join WhatsApp Group