ಸುಬ್ರಹ್ಮಣ್ಯ: ಇನ್ ಸ್ಟಾಗ್ರಾಂ ಪರಿಚಯ – ಅನ್ಯಕೋಮಿನ ಯುವಕನ ಭೇಟಿಗೆ ಬಂದ ಯುವತಿ ➤ ಯುವಕನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ..!

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 06. ಇನ್ ಸ್ಟಾಗ್ರಾಂನಲ್ಲಿ ಪರಿಚಯಗೊಂಡ ಹಿಂದೂ ಯುವತಿಯನ್ನು ಅನ್ಯಕೋಮಿನ ಯುವಕನೋರ್ವ ಭೇಟಿಯಾಗಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸುಬ್ರಹ್ಮಣ್ಯದಲ್ಲಿ ವರದಿಯಾಗಿದೆ.

ಇನ್ ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಕಲ್ಲುಗುಂಡಿಯ ಅನ್ಯಕೋಮಿನ ಯುವಕ ಮತ್ತು ಸುಬ್ರಮಣ್ಯದ ಹಿಂದೂ ಯುವತಿ ಹಲವು ದಿನಗಳ ಕಾಲ ಫೋನ್ ಮೂಲಕ ಮಾತನಾಡುತ್ತಿದ್ದು, ಭೇಟಿಯಾಗಲು ಪ್ಲಾನ್ ಮಾಡಿ, ಅದರಂತೆ ಸುಬ್ರಹ್ಮಣ್ಯ ಬಸ್ ಸ್ಟಾಂಡ್ ನಲ್ಲಿ ಭೇಟಿಯಾಗಿದ್ದರು. ಈ ವಿಚಾರ ತಿಳಿದ ಗುಂಪೊಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಪರಿಣಾಮ ಯುವಕನ ತಲೆ ಗಂಭೀರ ಗಾಯಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

Scroll to Top