ಒಂಟಿ ಮಹಿಳೆಯನ್ನು ಕಟ್ಟಿಹಾಕಿ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 06. ಮನೆಯಲ್ಲಿದ್ದ ಒಂಟಿ ಮಹಿಳೆಯ ಕೈ ಕಾಲು ಕಟ್ಟಿ ದರೋಡೆ ಮಾಡಿರುವ ಘಟನೆ ನಗರದ ಕೆಎಸ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 

ಲಕ್ಷ್ಮೀ ಎಂಬವರ ಮಗಳು ಡಾ.ವೈಷ್ಣವಿ ಸುರೇಶ್ ಅವರ ಕ್ಲಿನಿಕ್‌ ಗೆ ತೆರಳಿದ್ದ ವೇಳೆ ಬಂದ ನಾಲ್ವರು ದುಷ್ಕರ್ಮಿಗಳು ಮನೆಗೆ ನುಗ್ಗಿ ಲಕ್ಷ್ಮೀ ಅವರನ್ನು ಕಟ್ಟಿಹಾಕಿ 3.5 ಲಕ್ಷ ನಗದು, ಮೊಬೈಲ್ ಸೇರಿದಂತೆ 7.5 ಲಕ್ಷ ಮೌಲ್ಯದ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ. ವೈದ್ಯೆ ವೈಷ್ಣವಿ ಕಳೆದ ಒಂದು ತಿಂಗಳಿನಿಂದ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರ ಬಳಿಯೇ ಇದ್ದರು. ಈ ಕುರಿತು ಡಾ. ವೈಷ್ಣವಿ ಕೆಎಸ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Scroll to Top