ಪೊಲೀಸರ ವಶದಲ್ಲಿದ್ದ ಯುವಕ ಅನುಮಾನಾಸ್ಪದವಾಗಿ ಮೃತ್ಯು ➤ ಪೊಲೀಸರ ಹಲ್ಲೆಯಿಂದ ಮೃತಪಟ್ಟಿರುವ ಶಂಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 06. ಕಾಟನ್ ಪೇಟೆ ಠಾಣೆಯಲ್ಲಿ ಬಂಧಿತನಾಗಿದ್ದ ಆರೋಪಿಯೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಪೊಲೀಸರ ಹಲ್ಲೆಯಿಂದ ಲಾಕಪ್‌ನಲ್ಲಿಯೇ ಯುವಕ ಮೃತಪಟ್ಟಿದ್ದಾನೆಂದು ಕುಟುಂಬ ಮೂಲಗಳು ಆರೋಪಿಸಿದೆ.

 

ಹಳೆಯ ದರೋಡೆ ಸಂಚು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣಕ್ಕೆ ನ್ಯಾಯಾಲಯದ ವಾರೆಂಟ್‌ ಹಿನ್ನೆಲೆ ಬಂಧಿತನಾಗಿದ್ದ ಭಕ್ಷಿ ಗಾರ್ಡನ್‌ ನಿವಾಸಿ ವಿನೋದ್‌ (23) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಆರು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಈತನಿಗೆ ಬಂಧಿಸಲಾಗಿತ್ತು. ಈತ ಸೆಲ್ ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಮೂಡಿದೆ. ಪೊಲೀಸರ ಹಲ್ಲೆಯಿಂದ ಲಾಕಪ್‌ನಲ್ಲಿ ವಿನೋದ್‌ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ.

Also Read  ನಾಳೆಯಿಂದ ಶಕ್ತಿ ಯೋಜನೆಗೆ ಸಿಎಂ ಚಾಲನೆ

 

error: Content is protected !!
Scroll to Top