(ನ್ಯೂಸ್ ಕಡಬ) newskadaba.com ಕಲಬುರಗಿ, ಜ.03. ಚಲಿಸುತ್ತಿರುವ ರೈಲು ಹತ್ತಲು ಹೋಗಿ ಆಯತಪ್ಪಿ ಕೆಳಗೆ ಬೀಳುತ್ತಿದ್ದ 50 ವರ್ಷದ ಮಹಿಳೆಯನ್ನು ಆರ್‌ಪಿಎಫ್ ಸಿಬ್ಬಂದಿ ಮತ್ತು ಕಾರ್ಮಿಕರು ಸೇರಿ ರಕ್ಷಿಸಿರುವ ಘಟನೆ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ವರದಿಯಾಗಿದೆ.

ಮುಂಬೈ ನಾಗರಕೋಯಿಲ್ ರೈಲು ಕಲಬುರಗಿ ನಿಲ್ದಾಣಕ್ಕೆ ಆಗಮಿಸುವಾಗ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ರೈಲು ಚಲಿಸುತ್ತಿರುವಾಗಲೇ ಮಹಿಳೆಯೋರ್ವರು ಹತ್ತಲು ಯತ್ನಿಸಿದ್ದು, ಈ ವೇಳೆ ಆಯತಪ್ಪಿ ಬೀಳುತ್ತಿದ್ದ ಮಹಿಳೆಯನ್ನು ಕಂಡ ತಕ್ಷಣ ಆರ್‌ಪಿಎಫ್ ಸಿಬ್ಬಂದಿ ಆರ್.ಡಿ. ಶೇರಖಾನ್ ಹಾಗೂ ಕಾರ್ಮಿಕರೋರ್ವರು ಮಹಿಳೆಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. ಈ ದೃಶ್ಯ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ವರದಿ ತಿಳಿಸಿದೆ.














