ಉಳ್ಳಾಲ: ಚಿನ್ನವನ್ನು ಮಹಿಳೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮರೆದ ಚಾಲಕ ಮತ್ತು ನಿರ್ವಾಹಕ



(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 02. ಉಳ್ಳಾಲದಿಂದ ಮಂಗಳೂರಿನ ಕಡೆಗೆ ಸಂಚರಿಸುತ್ತಿದ್ದ ಬಸ್ ನಲ್ಲಿ ಸಿಕ್ಕ ಚಿನ್ನವನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಬಸ್ ಚಾಲಕ ನಿಸಾರ್ ಅಹಮ್ಮದ್ ಹಾಗೂ ನಿರ್ವಾಹಕ ಇಬ್ರಾಹಿಂ ಪ್ರಮಾಣಿಕತೆ ಮೆರೆದ ಘಟನೆ ಉಳ್ಳಾಲದಿಂದ ವರದಿಯಾಗಿದೆ.





ಬಿ.ಸಿ,ರೋಡ್ ಮೂಲದ ಮಹಿಳೆ ತಸ್ಲಿಮಾ ಫಾರೂಕ್ ಎಂಬವರು ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಮಂಗಳೂರಿನಿಂದ ಉಳ್ಳಾಲ ಕಡೆಗೆ ಸಂಚರಿಸುತ್ತಿದ್ದ ಶಾಲಿಮಾರ್ ಬಸ್ನಲ್ಲಿ ತೆರಳುತ್ತಿದ್ದ ವೇಳೆ 18 ಗ್ರಾಂನ ಚಿನ್ನದ ಬಳೆಯೊಂದನ್ನು ಕಳೆದುಕೊಂಡಿದ್ದರು. ಈ ಬಳೆ ಬಸ್ ನಿರ್ವಾಹಕ ಇಬ್ರಾಹಿಂ ಅವರಿಗೆ ಸಿಕ್ಕಿದ್ದು, ತಕ್ಷಣವೇ ಅವರು ಉಳ್ಳಾಲದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಉಳ್ಳಾಲ ಠಾಣಾ ಪೊಲೀಸ್ ಉಪ ನಿರೀಕ್ಷಕ ಶಿವಕುಮಾರ್ ಅವರ ಮೂಲಕ ಮಹಿಳೆಗೆ ಬಳೆಯನ್ನು ಹಸ್ತಾಂತರ ಮಾಡಿ ಪ್ರಾಮಾಣಿಕತೆ  ಮರೆದರು.






error: Content is protected !!
Scroll to Top