ಕಾಂಕ್ರೀಟ್ ಮಿಕ್ಸರ್ ಲಾರಿ ಕಾಲುವೆಗೆ ಪಲ್ಟಿ ➤ ಇಬ್ಬರು ಮೃತ್ಯು



(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 31. ಚಾಲಕನ ನಿಯಂತ್ರಣ ತಪ್ಪಿ ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ಪಲ್ಟಿ ಹೊಡೆದು ಕಾಲುವೆಗೆ ಬಿದ್ದ ಪರಿಣಾಮ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನೆಲಮಂಗಲದ ಸೊಂಡೆಕೊಪ್ಪ ಬಳಿ ವರದಿಯಾಗಿದೆ.





ಮೃತಪಟ್ಟಿರುವರನ್ನು ಬಿಜಾಪುರ ಜಿಲ್ಲೆಯ ಅಂಬಳನೂರು ಗ್ರಾಮದ ಸಿದ್ದಪ್ಪ (31) ಮತ್ತು ರಾಯಚೂರಿನ ಮಿಟೆಕೇಲೂರು ಗ್ರಾಮದ ಮುತ್ತು (25) ಎಂದು ಗುರುತಿಸಲಾಗಿದೆ. ಮಲ್ಲಾಪುರ ಗ್ರಾಮದ ಕಾಂಕ್ರೀಟ್ ಮಿಸ್ಕ್ ಪ್ಲಾಂಟ್’ನಲ್ಲಿ ಕೆಲಸ ಮಾಡುತ್ತಿದ್ದ ಇವರು, ಚಾಲಕನ ನಿಯಂತ್ರಣ ತಪ್ಪಿ ಲಾರಿ ಕಾಲುವೆಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಘಟನೆಯಿಂದಾಗಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






 

error: Content is protected !!
Scroll to Top