ಪೆರ್ಲಂಪಾಡಿ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 29. ಅಡಿಕೆ ತೆಗೆಯುತ್ತಿದ್ದ ವೇಳೆ ಅಡಿಕೆ ಮರ ತುಂಡಾದ ಪರಿಣಾಮ ವ್ಯಕ್ತಿಯೋರ್ವರು ಬಿದ್ದು ಮೃತಪಟ್ಟ ಘಟನೆ ಕೊಳ್ತಿಗೆ ಗ್ರಾಮದ ಕೊರ್ಬಂಡ್ಕದಿಂದ ಗುರುವಾರದಂದು ನಡೆದಿದೆ.

ಮೃತರನ್ನು ದೊಡ್ಡಮನೆ ನಿವಾಸಿ ಚಂದ್ರಶೇಖರ ಗೌಡ (56) ಎಂದು ಗುರುತಿಸಲಾಗಿದೆ. ಇವರು ಇಂದಹ ಬೆಳಗ್ಗೆ ತನ್ನ ಅಡಿಕೆ ತೋಟದಲ್ಲಿ ಅಡಿಕೆ ತೆಗೆಯಲೆಂದು ಮರ ಹತ್ತಿದ್ದ ವೇಳೆ, ಅಡಿಕೆ ಮರ ಅರ್ಧದಿಂದ ತುಂಡಾದ ಪರಿಣಾಮ ಮರ ಸಮೇತ ಚಂದ್ರಶೇಖರ ಗೌಡರವರು ನೆಲಕ್ಕೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top