ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ ➤ ಮಂಗಳೂರಿನ ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಸೌದಿ ಅರೇಬಿಯಾ, ಡಿ. 29. ಕಾರು ಮತ್ತು ಲಾರಿ‌ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮಂಗಳೂರಿನ ಸುರತ್ಕಲ್‌ ನ ಯುವಕ ಮೃತಪಟ್ಟ ಘಟನೆ ಸೌದಿ ಅರೇಬಿಯಾದಿಂದ ವರದಿಯಾಗಿದೆ.


ಮೃತ ಯುವಕನನ್ನು ತಡಂಬೈಲ್‌ ನಿವಾಸಿ ಫಾಝಿಲ್ ಎಂದು ಗುರುತಿಸಲಾಗಿದೆ. ಫಾಝಿಲ್ ಗೆ ಕಳೆದ ವರ್ಷ ವಿವಾಹವಾಗಿತ್ತು. ಸೌದಿ ಅರೆಬಿಯಾದ ಅಲ್ ಅಸ ಎಂಬಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಫಾಝಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Scroll to Top