➤ ಡಿ.29 ಪುತ್ತೂರು – ಕಡಬ ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 28. ಪುತ್ತೂರು ವಿದ್ಯುತ್ ಉಪಕೇಂದ್ರದಲ್ಲಿ 110ಕೆವಿ ಮತ್ತು 33ಕೆ.ವಿ ಲೈನ್ ಬೇ, ಪರಿವರ್ತಕ ಮತ್ತು 11ಕೆವಿ ಫೀಡರುಗಳ ಪಾಲನಾ ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆ ಡಿ. 29ರಂದು (ಗುರುವಾರ) ಪೂರ್ವಾಹ್ನ 10ರಿಂದ ಸಾಯಂಕಾಲ 5ಗಂಟೆಯವರೆಗೆ 33ಕೆ.ವಿ ಪುತ್ತೂರು-ಕಡಬ-ಸುಬ್ರಹ್ಮಣ್ಯ ಹಾಗೂ 33 ಕೆ.ವಿ ಪುತ್ತೂರು ನೆಲ್ಯಾಡಿ ವಿದ್ಯುತ್ ಮಾರ್ಗಗಳ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದ್ದರಿಂದ 110/33/11ಕೆವಿ ಪುತ್ತೂರು ಹಾಗೂ 33/11ಕೆವಿ ಕಡಬ, ನೆಲ್ಯಾಡಿ, ಸವಣೂರು, ಬಿಂದು ಮತ್ತು ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ಸರಬರಾಜಾಗುವ ವಿದ್ಯುತ್ ಬಳಕದಾರರು ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.

 

 

Scroll to Top