ಉಪ್ಪಿನಂಗಡಿ: ಮನೆ ಬೆಂಕಿಗಾಹುತಿ ➤ ಅಪಾರ ಹಾನಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 25. ಮನೆಯ ಮೇಲಂತಸ್ತು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಕಡವಿನ ಬಾಗಿಲು ಎಂಬಲ್ಲಿ ನಡೆದಿದೆ.


ಇಲ್ಲಿನ ಬಿ.ಕೆ. ಇಸ್ಮಾಯಿಲ್ ಎಂಬವರಿಗೆ ಸೇರಿದ ಮನೆಯ ಮೇಲಂತಸ್ತು ಬೆಂಕಿಗಾಹುತಿಯಾಗಿದ್ದು, ಪರಿಣಾ. ಬೆಲೆಬಾಳುವ ಸೋಫಾಸೆಟ್, ಟಿಫಾಯಿ, ಬಟ್ಟೆ ಬರೆ, ಕಿಟಕಿ ಹಾಗೂ ಬಾಗಿಲು ಸುಟ್ಟು ಹೋಗಿವೆ. ಅಲ್ಲದೇ, ಮನೆಯ ಒಂದು ಬದಿಯ ಗೋಡೆ ಕೂಡಾ ಬಿರುಕು ಬಿಟ್ಟಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣವೆನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಬೆಂಕಿ ನಂದಿಸಿದ್ದಾರೆ.

Scroll to Top