ಉಪ್ಪಿನಂಗಡಿ: ಕುದುರೆಗೆ ಬಸ್ ಢಿಕ್ಕಿ ➤ ಕುದುರೆ ಹಾಗೂ ಸವಾರ ಗಂಭೀರ



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 25. ಕುದುರೆಯೊಂದಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕುದುರೆ ಹಾಗೂ ಕುದುರೆ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಪದುಮಲೆ ಎಂಬಲ್ಲಿ ಭಾನುವಾರದಂದು ಬೆಳಗ್ಗೆ ನಡೆದಿದೆ.







 


ಗಾಯಗೊಂಡವರನ್ನು ಕುದುರೆ ಸವಾರಿ ನಡೆಸುತ್ತಿದ್ದ ಸಚಿನ್ ಪೆಲಪ್ಪಾರ್ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಕುದುರೆ ಕೂಡಾ ಗಂಭೀರ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದೆ ಎಂದು ತಿಳಿದುಬಂದಿದೆ.






error: Content is protected !!
Scroll to Top