➤ ನಾಡಬಂದೂಕಿನ ಗುಂಡು ತಗುಲಿ ಬಾಲಕ ಮೃತ್ಯು

ನ್ಯೂಸ್ ಕಡಬ) newskadaba.com ರಾಮನಗರ , ಡಿ. 19  ನಾಡಬಂದೂಕಿನ ಗುಂಡು ಅಕಸ್ಮಿಕವಾಗಿ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ  ರಾಮನಗರ ತಾಲೂಕಿನ ಕಾಡಶಿವನಹಳ್ಳಿಯಲ್ಲಿ ನಡೆದಿದೆ. ಬಂದೂಕು ತೆಗೆದುಕೊಂಡು ಮಕ್ಕಳು ಆಟವಾಡುವಾಗ ಮೃತ ಶಮಾ ಸಹೋದರ ಸಾಜೀದ್(16) ಬಂದೂಕಿನ ಟ್ರಿಗರ್​ ಒತ್ತಿದ್ದಾನೆ. ಈ ವೇಳೆ ನಾಡಬಂದೂಕಿನ ಗುಂಡು ತಗುಲಿ ಶಮಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಯುಪಿ ಮೂಲದ ಅಮಿನುಲ್ಲಾ, ಸಮ್​ಸೂನ್​ ಕುಟುಂಬ ಮೂರು ದಿನದ ಹಿಂದಷ್ಟೆ ಕೂಲಿ ಕೆಲಸಕ್ಕೆ ಬಂದಿದ್ದು ಮಲ್ಲೇಶ ಎಂಬಾತನ ಜಮೀನಿನಲ್ಲಿ ಕೆಲಸಕ್ಕಿದ್ದರು. ತಂದೆ-ತಾಯಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಾಜಿದ್ ಹಾಗೂ ಶಮಾ ನಾಡಬಂದೂಕಿನೊಂದಿಗೆ ಆಟವಾಡಿದ್ದಾರೆ. ಈ ವೇಳೆ ತನ್ನ ಅರಿವಿಗೆ ಬರೆದೇ ಸಾಜಿದ್ ಬಂದೂಕಿನ ಟ್ರಿಗರ್ ಒತ್ತಿದ್ದಾನೆ. ಇದರಿಂದ ಗುಂಡು ಶಮಾನಿಗೆ ತಗುಲಿದೆ. ಗುಂಡು ಹಾರಿಸಿದ ಸಾಜೀದ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಬಂದೂಕು‌ ಇಟ್ಟಿದ್ದ ತೋಟದ ಮಾಲೀಕ ಮಲ್ಲೇಶ್​ನನ್ನೂ ಬಂಧಿಸಲಾಗಿದೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತ- ವ್ಯಕ್ತಿ ಮೃತ್ಯು

error: Content is protected !!
Scroll to Top