ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ !

(ನ್ಯೂಸ್ ಕಡಬ) newskadaba.com ಮಾಲೂರು, ಡಿ. 17. ಶೌಚಾಲಯಕ್ಕೆ ತೆರಳಿದ್ದ ಗರ್ಭಿಣಿ ಮಹಿಳೆಯೊಬ್ಬರು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಗರದ ಪುರಸಭೆಯಲ್ಲಿ ನಡೆದಿದೆ.

 

ಉತ್ತರಪ್ರದೇಶದ ಮಹಿಳೆ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಹೋಗಿದ್ದಾಗ ಆಕೆಗೆ ಬಿ.ಪಿ ಜಾಸ್ತಿಯಾಗಿತ್ತು. ತಕ್ಷಣವೇ ಅವರನ್ನು ಕೋಲಾರ ಆಸ್ಪತ್ರೆಗೆ ಸಾಗಿಸಲು ವೈದ್ಯರು ಸೂಚಿಸಿದ್ದರು. ಆಂಬುಲೆನ್ಸ್ ಬರುವಷ್ಟರಲ್ಲಿ ಮಹಿಳೆಗೆ ಶೌಚಾಲಯದಲ್ಲೇ ಹೆರಿಗೆಯಾಗಿದೆ. ನಂತರ ಆಶಾ ಕಾರ್ಯಕರ್ತೆಯರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರು.

Scroll to Top