ಕಡಬ: ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಿತಿನ್ ಕುಮಾರ್ ಗೆ ಕಡಬ ಪೊಲೀಸ್ ಠಾಣೆಯಲ್ಲಿ ಸನ್ಮಾನ        



(ನ್ಯೂಸ್ ಕಡಬ) newskadaba.com ಕಡಬ, ಡಿ. 16. ಖೋಖೋ ಪಂದ್ಯಾಟದಲ್ಲಿ ರಾಷ್ಡ್ರಮಟ್ಟಕ್ಕೆ ಆಯ್ಕೆಯಾದ ಕೋಡಿಂಬಾಳದ ನಿತಿನ್ ಕುಮಾರ್ ಅವರನ್ನು ಕಡಬ ಠಾಣೆಯಲ್ಲಿ ಸನ್ಮಾನಿಸಲಾಯಿತು.







ಎಸ್.ಐ ಆಂಜನೇಯ ರೆಡ್ಡಿಯವರು ನಿತಿನ್ ಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿ, ಪೊಲೀಸರು ತಪ್ಪು ಮಾಡಿದವರನ್ನು ಶಿಕ್ಷಿಸಲು ಮಾತ್ರ ಇರುವವರಲ್ಲ, ಉತ್ತಮ ಸಾಧನೆ ಮಾಡಿದವರನ್ನು ಗುರುತಿಸುವುದು ಸಹ ನಮ್ಮ ಕರ್ತವ್ಯ. ಯಾವುದೇ ಪ್ರತಿಭೆಗಳನ್ನು ನಾವು ಪ್ರೋತ್ಸಾಹಿಸಿದಾಗ ಅವರಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಣೆ ನೀಡಿದಂತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ನಿತಿನ್ ಕುಮಾರ್ ತಂದೆ ರಮೇಶ್, ತಾಯಿ ವೇದಾವತಿ, ಪ್ರಮುಖರಾದ ಕೃಷ್ಣಪ್ಪ ಕುತ್ಯಾಡಿ ಹಾಗೂ ಠಾಣಾ ಪೊಲೀಸರು ಉಪಸ್ಥಿತರಿದ್ದರು.






 

 

error: Content is protected !!
Scroll to Top