ರಬ್ಬರ್ ತೋಟದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ

Death, deadbody, Waterfall

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 13. ಭಾಗಶಃ ಸುಟ್ಟು ಹೋದ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾದ ಘಟನೆ ಇಲ್ಲಿನ ನಡ ಗ್ರಾ.ಪಂ. ವ್ಯಾಪ್ತಿಯ ಕೇಲ್ತಾಜೆ ಸೊರಕ್ಯ ಎಂಬಲ್ಲಿ ನಡೆದಿದೆ.

 

ಕೇಲ್ತಜೆಯಿಂದ ಸುರ್ಯ ರಸ್ತೆಗೆ ಸಾಗುವ 1 ಕಿ.ಮೀ. ದೂರದದ ರಬ್ಬರ್‌ ತೋಟದ ಬದಿಯಲ್ಲಿ ಯಾವುದೇ ಗುರುತು ಸಿಗದ ಸ್ಥಿತಿಯಲ್ಲಿ ಸುಟ್ಟ ಮೃತದೇಹ ಪತ್ತೆಯಾಗಿದ್ದು, ಜನರು ದನ ಕಟ್ಟಲು ಕಾಡಿಗೆ ತೆರಳುವ ವೇಳೆ ದುರ್ನಾತ ಬೀರುವುದನ್ನು ಗಮನಿಸಿ ಪರಿಶೀಲಿಸಿದಾಗ ಕಣಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸುಟ್ಟ ದೇಹದ ಮೇಲೆ ಕಟ್ಟಿಗೆ ರಾಶಿ ಹಾಕಿ ಮುಚ್ಚಲಾಗಿದೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು, ಘಟನೆ ಹತ್ತು ದಿನಗಳ ಹಿಂದೆ ನಡೆದಿರುವ ಸಾಧ್ಯತೆಯಿದೆ, ಸ್ಥಳದಲ್ಲಿ ಕಾಲುಂಗುರ ಪತ್ತೆಯಾದ ಹಿನ್ನೆಲೆ ಮೃತದೇಹ ಮಹಿಳೆಯದ್ದಾಗಿರಬಹುದು ಎಂದು ಸಂಶಯಿಸಲಾಗಿದೆ. ಮೇಲ್ನೋಟಕ್ಕೆ ಇದೊಂದು ಉದ್ದೇಶಿತ ಕೊಲೆಯಂತೆ ಕಂಡುಬಂದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!

Join the Group

Join WhatsApp Group