ಮಂಗಳೂರು: ಕೊರಗಜ್ಜ ಕ್ಷೇತ್ರಕ್ಕೆ ನಟ ಶಿವರಾಜ್ ಕುಮಾರ್ ಭೇಟಿ

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 10. ಕರಾವಳಿಯ ಕಾರಣೀಕ ಶಕ್ತಿ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರು ದೆಕ್ಕಾಡಿಗೆ ನಟ ಶಿವರಾಜ್ ಕುಮಾರ್ ಅವರು ಕುಟುಂಬ ಸಮೇತ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

 

‘ವೇದ’ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ಗೆ ಮಂಗಳೂರಿಗೆ ಆಗಮಿಸಿರುವ ಶಿವರಾಜ್ ಕುಮಾರ್ ಅವರು, ಮೊದಲ ಬಾರಿಗೆ ಪತ್ನಿ ಗೀತಾ ಹಾಗೂ ಕುಟುಂಬಸ್ಥರೊಂದಿಗೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಇವತ್ತು ವೇದ ಈವೆಂಟ್ ಇರೋ ಕಾರಣ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಕೊರಗಜ್ಜ ಕ್ಷೇತ್ರಕ್ಕೆ ಬಂದಿದ್ದೇನೆ. ಕೊರಗಜ್ಜನ ‌ಕ್ಷೇತ್ರದ ಕಾರಣಿಕದ ಬಗ್ಗೆ ನನಗೆ ರಕ್ಷಿತಾ ಅನೇಕ ಬಾರಿ ಹೇಳಿದ್ದರು. ಯಾವುದೇ ಆಡಂಬರ ಇಲ್ಲದೇ ಜನರು ಪ್ರಾರ್ಥನೆ ಮಾಡಲು ಇಲ್ಲಿ ಅವಕಾಶವಿದೆ. ಕೊರಗಜ್ಜನಿಗೆ ವೀಲ್ಯದೆಲೆ ಮತ್ತು ಶರಾಬು ಕೊಟ್ಟು ಪ್ರಾರ್ಥನೆ ಮಾಡುವ ಸರಳ ವಿಧಾನ ಖುಷಿ ಕೊಟ್ಟಿತು. ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಆಗೋದು ಬಿಡೋದು ದೈವದ ಇಚ್ಛೆ. ದೈವದೆದುರು ಶ್ರದ್ಧೆಯಿಂದ ಬೇಡುವುದು ನಮ್ಮ ಕಾರ್ಯ ಎಂದರು.

Scroll to Top