(ನ್ಯೂಸ್ ಕಡಬ)newskadaba.com ಬೆಂಗಳೂರು, ಡಿ. 09. ಮನೆಯಲ್ಲಿ ಆಟವಾಡುತ್ತಿದ್ದ 8 ತಿಂಗಳ ಮಗುವೊಂದು ಅಕಸ್ಮಿಕವಾಗಿ ಬಾಟಲ್‌ನ ರಬ್ಬರ್ ಮುಚ್ಚಳ ನುಂಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಗು ಆಟವಾಡುತ್ತಿದ್ದ ವೇಳೆ ಬಾಟಲ್‌ನ ರಬ್ಬರ್ ಮುಚ್ಚಳ ನುಂಗಿದ್ದು, ಈ ವಿಷಯ ಪೋಷಕರಿಗೂ ತಿಳಿದಿರಲಿಲ್ಲ. ಆದರೆ, ಒಂದು ವಾರದ ಬಳಿಕ ಮಗುವಿನ ಗಂಟಲಿನಲ್ಲಿ ಶಿಳ್ಳೆಯ ರೀತಿಯಲ್ಲಿ ಸೌಂಡ್ ಕೇಳಿ ಬಂದಿದ್ದರಿಂದ ಗಾಬರಿಗೊಂಡ ಪೋಷಕರು ಹತ್ತಿರದ ಅಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಮಗುವಿನ ಗಂಟಲಿನಲ್ಲಿ 2 ಸೆಂ.ಮೀ ಅಗಲದ ಮುಚ್ಚಳ ಇರುವುದನ್ನು ಗಮನಿಸಿ ಕೂಡಲೇ ಮುಚ್ಚಳವನ್ನು ತೆಗೆದು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
Also Read ಸತ್ಯ ನಾರಾಯಣ ಸ್ವಾಮಿ ಪೂಜೆ ಮಾಡಿದರೆ ಮನೆಯಲ್ಲಿ ಶಾಂತಿ ಅಭಿವೃದ್ಧಿಯ ವಾತಾವರಣ ಕಷ್ಟಗಳು ಪರಿಹಾರವಾಗುತ್ತದೆ