(ನ್ಯೂಸ್ ಕಡಬ) newskadaba.com ಮಧುಗಿರಿ, ಡಿ. 05. ರಾಜ್ಯಾದ್ಯಂತ ಆರಂಭಗೊಂಡ ಜೆಇ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ ಲಸಿಕೆ ಪಡೆದ ಮಕ್ಕಳಿಗೆ ತಲೆಸುತ್ತು ಬಂದ ಕಾರಣ ಆಸ್ಪತ್ರೆಗೆ ದಾಖಲಿಸಿದ ಘಟನೆ ವರದಿಯಾಗಿದೆ.
ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳನ್ನು ಆಯಿಷಾ, ಮೋರ್ನಿ, ಶೈಲಜಾ, ಉಷಾರಾಣಿ, ಸಂಜನಾ, ಸುಪ್ರಿಯಾ, ಸಹನಾ ಹಾಗೂ 7 ನೇ ತರಗತಿಯ ಸ್ನೇಹ ಹಾಗೂ ವೇದ ಎಂದು ಹೆಸರಿಸಲಾಗಿದೆ. ವಿಚಾರ ತಿಳಿದ ಟಿಹೆಚ್ಓ ಡಾ.ರಮೇಶ್ ಬಾಬು ತಮ್ಮ ವಾಹನದಲ್ಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಂಡ ಪರಿಣಾಮ ಆತಂಕ ದೂರವಾಗಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಮಕ್ಕಳಿಗೆ ತಲೆಸುತ್ತು, ಸುಸ್ತಾಗುವುದು ಹಾಗೂ ಚಳಿಯ ಅನುಭವಾಗುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದು ಅದಕ್ಕೂ ಸೂಕ್ತ ಚಿಕಿತ್ಸೆ ನೀಡಲಾಗಿದೆ.













