(ನ್ಯೂಸ್ ಕಡಬ) newskadaba.com ಕಾರ್ಕಳ, ಡಿ. 05. ಬಸ್ಸಿಗೆ ಹತ್ತುವ ವೇಳೆ ನಿಯಂತ್ರಣ ತಪ್ಪಿ ಚಕ್ರದಡಿಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಹಿರ್ಗಾನ ಬಸ್ಸು ನಿಲ್ದಾಣದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಚಿಕ್ಕಲ್ ಬೆಟ್ಟಿನ ಕೃಷ್ಣ ನಾಯಕ್(71) ಎಂದು ಗುರುತಿಸಲಾಗಿದೆ. ಇವರು ಹಿರ್ಗಾನದಿಂದ ಚಿಕ್ಕಲ್ ಬೆಟ್ಟು ಕ್ರಾಸ್’ಗೆ ಹೋಗಲು ಬಸ್ಸು ಹತ್ತುವ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ತಕ್ಷಣವೇ ಅವರನ್ನು ಅಂಬ್ಯುಲೆನ್ಸ್(108) ಮೂಲಕ ಆಸ್ಪತ್ರೆಗೆ ದಾಖಲಿಸಿದರೂ ದುರಾದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.













