ಮಂಗಳೂರು: ಲಾರಿಗಳ ನಡುವೆ ಭೀಕರ ಅಪಘಾತ ➤ ಇಬ್ಬರು ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 05. ಲಾರಿಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಚಾಲಕರಿಬ್ಬರು ಮೃತಪಟ್ಟ ಘಟನೆ ಗುರುಪುರ- ಕೈಕಂಬ ಬಳಿ ನಡೆದಿದೆ.

 

ಮೂಡಬಿದ್ರೆ ಕಡೆಯಿಂದ ಮಣ್ಣು ತುಂಬಿಕೊಂಡು ಬರುತ್ತಿದ್ದ ಲಾರಿಯು ವಿರುದ್ದ ದಿಕ್ಕಿನಿಂದ ತೆರಳುತ್ತಿದ್ದ ಲಾರಿಗೆ ಇಳಿಜಾರು ಪ್ರದೇಶದಲ್ಲಿ ಢಿಕ್ಕಿ ಹೊಡೆದಿದ್ದು, ಪರಿಣಾಮ ಲಾರಿಗಳು ರಸ್ತೆ ಬದಿಯ ಹೊಂಡಕ್ಕೆ ಬಿದ್ದಿವೆ. ಎರಡೂ ಲಾರಿಗಳು ಸಂಪೂರ್ಣ ಜಖಂಗೊಂಡಿದ್ದು, ಚಾಲಕರ ಮೃತದೇಹವನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Scroll to Top