ಬೆಳ್ತಂಗಡಿ: ಯಕ್ಷಗಾನದ ಬ್ಯಾನರ್ ಹರಿದು ವಿಕೃತಿ ಮೆರೆದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 03. ತಾಲೂಕಿನ ಮರೋಡಿ ಗ್ರಾಮದಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟದ ಪ್ರಯುಕ್ತ ಹಾಕಲಾಗಿದ್ದ ಬ್ಯಾನರ್ ನ್ನು ಯಾರೋ ದುಷ್ಕರ್ಮಿಗಳ ಗುಂಪೊಂದು ಹರಿದು ವಿಕೃತಿ ಮೆರೆದ ಘಟನೆ ವರದಿಯಾಗಿದೆ.

 

ಗ್ರಾಮದ ಪೊಸರಡ್ಕ ಗರಡಿ ವಠಾರದಲ್ಲಿ ಬುಧವಾರದಂದು ನಡೆದಿದ್ದ ಯಕ್ಷಗಾನ ಬಯಲಾಟಕ್ಕೆ ಶುಭ ಕೋರಲು ಅನೇಕ ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು. ಆದರೆ ಏಕಾಏಕಿ ಕಳೆದ ರಾತ್ರಿ ಬ್ಯಾನರ್ ನ್ನು ದುಷ್ಕರ್ಮಿಗಳು ಹರಿದಿದ್ದಾರೆ. ವಿಕೃತಿ ಮೆರೆದವರು ಯಾರೇ ಆದರೂ ತಪ್ಪೊಪ್ಪಿಕೊಳ್ಳದೇ ಹೋದರೆ ದೈವಗಳ ಮೊರೆ ಹೋಗುವುದಾಗಿ ಯಕ್ಷಗಾನ ಆಯೋಜಕರು ತಿಳಿಸಿದ್ದಾರೆ.

Scroll to Top