(ನ್ಯೂಸ್ ಕಡಬ) newskadaba.com ಮಂಗಳೂರು, ನ.19. ನಗರ ಐಡಿಯಲ್ ಐಸ್ ಕ್ರೀಂ ತನ್ನ ವಿಶಿಷ್ಟವಾದ ರುಚಿಯಿಂದಲೇ ದೇಶದಾದ್ಯಂತ ಹೆಸರುವಾಸಿಯಾಗಿದ್ದು, ಇದೀಗ `ಗ್ರೇಟ್ ಇಂಡಿಯನ್ ಐಸ್ ಕ್ರೀಂ’ ಎಂಬ ಹೆಗ್ಗಳಿಕೆಯೊಂದಿಗೆ 8 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕಳೆದ ಗುರುವಾರದಂದು ಹರಿಯಾಣದ ಗುರುಗ್ರಾಮದಲ್ಲಿ ನಡೆದ ಗ್ರೇಟ್ ಇಂಡಿಯನ್ ಐಸ್‍ಕ್ರೀಂ ಹಾಗೂ ಫ್ರೋಜನ್ ಡೆಸಾರ್ಟ್ ಸೀಸನ್ 6ರ ಸ್ಪರ್ಧೆಯಲ್ಲಿ ಮಂಗಳೂರು ಐಡಿಯಲ್ ಐಸ್ ಕ್ರೀಂ 8 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಸುಮಾರು 103 ಐಸ್ ಕ್ರೀಂ ತಯಾರಿಕಾ ಸಂಸ್ಥೆಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಐಡಿಯಲ್ ಐಸ್ ಕ್ರೀಂ 3 ಬೆಸ್ಟ್ ಇನ್ ಇಂಡಿಯಾ ಅವಾರ್ಡ್ಸ್ ಜೊತೆ 4 ಚಿನ್ನ ಹಾಗೂ 1 ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ.