(ನ್ಯೂಸ್ ಕಡಬ) newskadaba.com ಕಡಬ, ನ.18. ಇನೋವಾ ವಾಹನಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿದ ಘಟನೆ ಶನಿವಾರದಂದು ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಸಿಪಿಸಿಆರ್‌ಐ ಸಮೀಪ ನಡೆದಿದೆ.
ಮಂಗಳೂರಿನ ಮುರಳೀಧರ ಎಂಬವರು ಚಲಾಯಿಸುತ್ತಿದ್ದ ಇನ್ನೋವಾ ವಾಹನಕ್ಕೆ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಉಪ್ಪಿನಂಗಡಿಯ
ವಿವೇಕ್ ಎಂಬವರು ಚಲಾಯಿಸುತ್ತಿದ್ದ ಇನ್ನೋವಾ ಬಸ್ಸೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.