ನೆಲ್ಯಾಡಿ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ➤ ಲಕ್ಷಾಂತರ ರೂ. ಮೌಲ್ಯದ ನಗ- ನಗದು ಕಳವು



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ. 02. ಇಲ್ಲಿನ ಗೋಳಿತ್ತೊಟ್ಟು ಗ್ರಾಮದ ಅರಂತಬೈಲು ನಿವಾಸಿ ರಮ್ಲತ್‌ ಎಂಬವರ ಮನೆಯಿಂದ ಕಳೆದ ರಾತ್ರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನಗೈದಿರುವ ಘಟನೆ ನಡೆದಿದೆ.







ರಮ್ಲತ್‌ ಹಾಗೂ ಅವರ ಪತ್ನಿ ಖತೀಜಮ್ಮರವರು ದುಬೈಯಿಂದ ಬರುವ ತಮ್ಮ ಮಗನನ್ನು ಕರೆದುಕೊಂಡು ಬರಲು ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ್ದು, ತಡರಾತ್ರಿ ಮನೆಗೆ ಹಿಂತಿರುಗಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಡಾ. ವೀರಯ್ಯ ಹಾಗೂ ಪೊಲೀಸ್‌ ಅಧಿಕಾರಿಗಳು, ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top