ಪುತ್ತೂರು: ಅನ್ಯಕೋಮಿನ ಯುವಕರ ಜೊತೆ ಯುವತಿಯರು ಪತ್ತೆ



(ನ್ಯೂಸ್ ಕಡಬ) newskadaba.com ಪುತ್ತೂರು, ಆ.25. ಹಿಂದೂ ಯುವತಿ ಮತ್ತು ಕ್ರಿಶ್ಚಿಯನ್ ಯುವತಿಯರ ಜೊತೆ ಅನ್ಯಕೋಮಿನ ಯುವಕರು ಪತ್ತೆಯಾದ ಘಟನೆ ಇಲ್ಲಿನ ನೆಲ್ಲಿಕಟ್ಟೆಯ ಪಿಜ್ಜಾ ಹಟ್ ವೊಂದರಲ್ಲಿ ನಡೆದಿದೆ.







ಇಬ್ಬರು ಕ್ರಿಶ್ಚಿಯನ್ ಯುವತಿಯರು, ಓರ್ವ ಹಿಂದೂ ಯುವತಿ ಮತ್ತು ಇಬ್ಬರು ಮುಸ್ಲಿಂ ಯುವಕರು ಪಿಜ್ಜಾ ಹಟ್ ವೊಂದರಲ್ಲಿ ಊಟಕ್ಕೆ ಆಗಮಿಸಿದ್ದು, ಈ ಕುರಿತು ಮಾಹಿತಿ ತಿಳಿದ ಹಿಂದೂ ಸಂಘಟನಾ ಕಾರ್ಯಕರ್ತರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗಿದ್ದವರೆಲ್ಲಾ ಸ್ಥಳೀಯರೇ ಆಗಿದ್ದು ಮನೆಯವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.






error: Content is protected !!
Scroll to Top