ನೇತ್ರಾವತಿ ನದಿಗೆ ಮಲಿನ ತ್ಯಾಜ್ಯ ಎಸೆದ ಪ್ರಕರಣ ➤‌ ಬಾರ್ & ರೆಸ್ಟೋರೆಂಟ್ ಗೆ ದಂಡ ವಿಧಿಸಿದ ಗ್ರಾ.ಪಂ.

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 24. ನೇತ್ರಾವತಿ ನದಿ ನೀರಿಗೆ ಕಸ ಹಾಗೂ ಮಲಿನ ತ್ಯಾಜ್ಯಗಳನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಇಲ್ಲಿನ ನದಿ ದಡದಲ್ಲಿರುವ ಬಾರ್ & ರೆಸ್ಟೋರೆಂಟ್‌ಗೆ 5 ಸಾವಿರ ರೂಪಾಯಿ ದಂಡ ವಿಧಿಸಿದೆ.

 

ಇಲ್ಲಿನ ನಿರಾಲ ಬಾರ್ & ರೆಸ್ಟೋರೆಂಟ್‌ನವರು ಹೊಟೇಲ್‌ನ ಕಸ ಹಾಗೂ ಮಲಿನ ತ್ಯಾಜ್ಯಗಳನ್ನು ನದಿಗೆ ಎಸೆಯುತ್ತಿದ್ದ ಬಗ್ಗೆ ಸ್ವಚ್ಚತಾ ಘಟಕದ ಮೇಲುಸ್ತುವಾರಿ ಸಮಿತಿ ಸದಸ್ಯರು, ಪಂಚಾಯತ್ ಗೆ ನೀಡಿದ ದೂರಿನಂತೆ ಪಿಡಿಒ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಐದು ಸಾವಿರ ರೂ. ದಂಡ ವಿಧಿಸಿದ್ದಾರೆ ಎನ್ನಲಾಗಿದೆ.

Scroll to Top