(ನ್ಯೂಸ್ ಕಡಬ) newskadaba.com ರಿಯಾದ್, ನ.15. ಭಾರತೀಯ ಮೂಲದ ಯೋಗಕ್ಕೆ ಸೌದಿ ಅರೇಬಿಯಾ ಸರಕಾರವು ವಿಶೇಷ ಮಾನ್ಯತೆ ನೀಡಿದ್ದು ಕ್ರೀಡೆಯನ್ನಾಗಿ ಪರಿಗಣಿಸಿ ದೇಶದಲ್ಲಿ ಯೋಗ ಕಲಿಕೆಗೆ ಅನುಮತಿ ನೀಡಿದೆ.
ಇದರೊಂದಿಗೆ ಭಾರತೀಯ ಮೂಲದ ಯೋಗಕ್ಕೆ ಮಾನ್ಯತೆ ನೀಡಿದ ಮೊದಲ ಮುಸ್ಲಿಂ ರಾಷ್ಟ್ರವೆಂಬ ಹೆಗ್ಗಳಿಕೆಗೂ ಸೌದಿ ಅರೇಬಿಯಾ ಪಾತ್ರವಾಗಿದೆ. ಈ ಹಿಂದೆ ಜೂನ್ 21 ರಂದು ನಡೆಸಲಾಗುವ ವಿಶ್ವ ಯೋಗ ದಿನದ ಸಹಭಾಗಿತ್ವವನ್ನು ಸೌದಿ ಅರೇಬಿಯಾ ಪಡೆದಿರಲಿಲ್ಲ. ಆದರೆ ಈಗ ಕೈಗೊಂಡಿರುವ ನಿರ್ಧಾರ ಐತಿಹಾಸಿಕವಾಗಿದ್ದು, ಬದಲಾವಣೆಯ ಸೂಚನೆ ಎನ್ನಲಾಗಿದೆ.
2015ರಲ್ಲಿ ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತ್ತು. ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿರುವ ಭಾರತೀಯರ ಶಾಲೆಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.