ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆ ➤ ನೆಟ್ಟಣ ಪೇಟೆಗೆ ನುಗ್ಗಿದ ನೆರೆ ನೀರು

(ನ್ಯೂಸ್ ಕಡಬ) newskadaba.com ಕಡಬ, ಆ.02. ಮಂಗಳವಾರ ಸಂಜೆ ಸುಬ್ರಹ್ಮಣ್ಯ ಹಾಗೂ ಕಡಬ ಪರಿಸರದಲ್ಲಿ ಭಾರೀ ಮಳೆಯಾಗಿದ್ದು, ನೆಟ್ಟಣ ಪೇಟೆಗೆ ನೆರೆ ನೀರು ನುಗ್ಗಿದೆ.

ನೆಟ್ಟಣ ಪೇಟೆಯ ಬದಿಯಲ್ಲಿ ಹೊಳೆಯೊಂದು ಹರಿಯುತ್ತಿದ್ದು, ಮಂಗಳವಾರ ರಾತ್ರಿ ಹೊಳೆಯ ನೀರು ಪೇಟೆಗೆ ನುಗ್ಗಿದ್ದು, ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ನೀರು ನಿಂತಿದೆ. ಅಲ್ಲದೆ ಪೇಟೆಯಲ್ಲಿನ ಕೆಲವು ಅಂಗಡಿಗಳಿಗೆ ನೀರು ನುಗ್ಗಿದೆ.

 

Scroll to Top