ಹನ್ನೊಂದು ಜಿಲ್ಲೆಗಳಿಗೆ NSUI ನ ಸಾಮಾಜಿಕ ಜಾಲತಾಣ ಸಂಯೋಜಕರ ನೇಮಕ ➤ ದ.ಕ ಜಿಲ್ಲೆಗೆ ಟಿ.ಎಂ ಶಾಜ್ ತೆಕ್ಕಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 02. ಹನ್ನೊಂದು ಜಿಲ್ಲೆಗಳಿಗೆ NSUI ಯ ಸಾಮಾಜಿಕ ಜಾಲತಾಣ ಸಂಯೋಜಕರನ್ನು ನೇಮಕ ಮಾಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಟಿ.ಎಂ.ಶಾಜ್ ತೆಕ್ಕಿಲ್ ರವರನ್ನು ನೇಮಕ ಮಾಡಲಾಗಿದೆ.

ಸುಳ್ಯ ಸಂಪಾಜೆ ಗ್ರಾಮದ ಗೂನಡ್ಕ ತೆಕ್ಕಿಲ್ ಹೈಸ್ಕೂಲಿನ ಮಾಜಿ ವಿದ್ಯಾರ್ಥಿ ನಾಯಕ ಟಿ.ಎಂ.ಶಾಜ್ ತೆಕ್ಕಿಲ್ ರವರನ್ನು NSUI ನ ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಯೋಜಕರಾಗಿ, ರಾಜ್ಯದ ಎನ್ ಎಸ್ ಯು ಐ ಅಧ್ಯಕ್ಷರಾದ ಕೀರ್ತಿ ಗಣೇಶ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ರೇವಾ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸದ ಮುಗಿಸಿದ ಟಿ ಎಂ ಶಾಜ್ ಹಿರಿಯ ಕಾಂಗ್ರೇಸ್ ಮುಖಂಡ ಟಿ ಎಂ ಶಾಹೀದ್ ತೆಕ್ಕಿಲ್ ರವರ ಪುತ್ರ.

error: Content is protected !!

Join the Group

Join WhatsApp Group