ಪುತ್ತೂರು: ಮಾಜಿ ಸೈನಿಕನಿಂದ ಕಾರ್ಮಿಕನಿಗೆ ಹಲ್ಲೆ ಆರೋಪ ➤ ಆಸ್ಪತ್ರೆಗೆ ದಾಖಲು



(ನ್ಯೂಸ್ ಕಡಬ) newskadaba.com ಪುತ್ತೂರು, ಜು. 26. ಮಾಜಿ ಸೈನಿಕರೋರ್ವರು ನನಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಾರ್ಮಿಕರೊಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ವರದಿಯಾಗಿದೆ.








ಬಪ್ಪಳಿಗೆ ತೆಂಕಿಲ ನಿವಾಸಿ ರವಿ ಹಲ್ಲೆಗೊಳಗಾದವರು. ನಾನು ಸೋಮವಾರದಂದು ಸಂಜೆ ಸರಕಾರಿ ನೌಕರರ ಸಭಾ ಭವನದ ಅಂಗಳವನ್ನು ಸ್ವಚ್ಛಗೊಳಿಸಿ, ಕಸವನ್ನು ಸೈನಿಕ ಭವನದ ಆವರಣದ ಪಕ್ಕ ರಾಶಿ ಹಾಕಿದ್ದೇನೆ ಎಂದು ಆರೋಪಿಸಿ ಮಾಜಿ ಸೈನಿಕ ಹಲ್ಲೆ ನಡೆಸಿರುವುದಾಗಿ ರವಿ ಆರೋಪಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿರುವ ರವಿ ಯವರ ಮೇಲೆ ಹಲ್ಲೆಯಾಗಿರುವ ವಿಚಾರ ತಿಳಿದ ದಲಿತ ಸಂಘಟನೆಯ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪೊಲೀಸರು ಕೂಡಾ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದುಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.






error: Content is protected !!
Scroll to Top