ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡಿ ಇಲ್ಲಿದೆ ಚಿನ್ನದ ದರ



(ನ್ಯೂಸ್‌ ಕಡಬ) newskadaba.com,  ಮೇ.15: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಆಗಿ, ಡಾಲರ್ ಬಲಗೊಂಡ ಹಿನ್ನೆಲೆ ಚಿನ್ನ ಬೆಳ್ಳಿ ದರಗಳು ಕುಸಿತ ಕಂಡಿವೆ. ಭಾರತದಲ್ಲಿ ಆಮದು ಸುಂಕ ಹೆಚ್ಚಳದಿಂದ ದಿಢೀರ್ 8 ಸಾವಿರದಷ್ಟು ಏರಿಕೆಯಾಗಿದ್ದ ಬೆಲೆಯಲ್ಲಿ ಇಂದು 2240 ರೂಪಾಯಿ ಇಳಿಕೆ ಆಗಿದೆ.







24 ಕ್ಯಾರೆಟ್ 10 ಗ್ರಾಂ ನಲ್ಲಿ 2240 ರೂ ಇಳಿಕೆ ಆಗಿ,1,60,090 ರೂಪಾಯಿ ಬೆಲೆ ದಾಖಲಾಗಿದೆ. 1 ಗ್ರಾಂ ಬೆಲೆ ಇಂದು 224 ರೂ ಇಳಿಕೆ ಆಗಿದ್ದು, 16,009 ರೂ ದಾಖಲಾಗಿದೆ.






22 ಕ್ಯಾರೆಟ್ 1 ಗ್ರಾಂ ಬೆಲೆ 205 ರೂ ಇಳಿಕೆ ಆಗಿ 1 ಗ್ರಾಂ ಬೆಲೆ 14,675 ರೂ ಆಗಿದ್ದು 10 ಗ್ರಾಂ ಬೆಲೆಯಲ್ಲಿ 2050 ರೂ ಇಳಿಕೆಯಾಗಿ 10 ಗ್ರಾಂ ಗೆ 1,46,750 ರೂಪಾಯಿಗೆ ತಲುಪಿದೆ.

ಬೆಳ್ಳಿ ಬೆಲೆ ಕೂಡಾ ಇಳಿಕೆಯಾಗಿದೆ. 10 ರೂ ಇಳಿದು, 290 ರೂ ಗ್ರಾಂ ಬೆಲೆಯಾಗಿದ್ದು, ಕೆಜಿ ಬೆಲೆ 2.90 ಲಕ್ಷ ರೂಪಾಯಿ ಆಗಿದೆ.

ಬೆಲೆ ಇಳಿಕೆಗೆ ಕಾರಣಗಳು

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಬೆಳ್ಳಿ ದರ ಇಳಿಕೆ ಆಗಿದೆ. ಇಂಧನ – ಕಚ್ಚಾ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಹಣದುಬ್ಬರದ ಕಳವಳ ಮತ್ತೆ ಉಂಟಾಗಿದೆ. ಹೀಗಾಗಿ ಬಡ್ಡಿದರಗಳು ದೀರ್ಘಕಾಲ ಹೆಚ್ಚಿರಬಹುದೆಂಬ ನಿರೀಕ್ಷೆಗಳು ಬಲಗೊಂಡವು.

ಹೀಗಾಗಿ ಹೆಚ್ಚಿನ ತೈಲ ಬೆಲೆಗಳು, ಬಾಂಡ್ ಇಳುವರಿ ಹಾಗೂ ಅಮೆರಿಕದ ಡಾಲರ್ ಎರಡನ್ನೂ ಹೆಚ್ಚಿಸಿದೆ. ಇದು ಚಿಬ್ನದ ಬೆಲೆಗಳ ಮೇಲೆ ಒತ್ತಡ ಉಂಟುಮಾಡಿ ಕುಸಿತಕ್ಕೆ ಕಾರಣವಾಗಿದೆ.

error: Content is protected !!
Scroll to Top