ಕಡಬ: ಸರಸ್ವತೀ ವಿದ್ಯಾಲಯದ ಶಿಶುಮಂದಿರದ ತಡೆಗೋಡೆ ಕುಸಿತ..!!

(ನ್ಯೂಸ್ ಕಡಬ) newskadaba.com ಕಡಬ, ಜು. 08. ನಿರಂತರ ಸುರಿದ ಮಳೆಗೆ ಕಡಬ-ಪಂಜ ರಸ್ತೆಯ ವಿದ್ಯಾನಗರದಲ್ಲಿನ ಶಾಲೆಯೊಂದರ ತಡೆಗೋಡೆ ಕುಸಿದು ಬಿದ್ದ ಘಟನೆ ವರದಿಯಾಗಿದೆ.

ಇಲ್ಲಿನ ಸರಸ್ವತೀ ವಿದ್ಯಾಲಯವು ತಮ್ಮ ಶಾಲಾ ವಠಾರದಲ್ಲಿದ್ದ ಶಿಶು ಮಂದಿರದ ಬಳಿ ತಡೆಗೋಡೆ ನಿರ್ಮಿಸಿತ್ತು. ಇದೀಗ ನಿರಂತರ ಸುರಿಯುತ್ತಿರುವ ವಿಪರೀತ ಮಳೆಗೆ ರಸ್ತೆ ಸಮೀಪದ ತಡೆಗೋಡೆಯ ಮಣ್ಣು ಸಡಿಲಗೊಂಡು ಪೂರ್ತಿಯಾಗಿ ವಾಲಿಕೊಂಡಿದೆ. ಪಿಲ್ಲರ್ ಅಳವಡಿಸದೇ ತಡೆಗೋಡೆ ನಿರ್ಮಿಸಿರುವುದೇ ಈ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Scroll to Top