ಕೊಲ್ಲಮೊಗ್ರು: ವ್ಯಕ್ತಿಗೆ ಚೂರಿ ಇರಿತ..!!

(ನ್ಯೂಸ್ ಕಡಬ) newskadaba.com ಜು. 03. ವ್ಯಕ್ತಿಯೋರ್ವರಿಗೆ ಅಪರಿಚಿತ ವ್ಯಕ್ತಿ ಚೂರಿಯಿಂದ ಇರಿದ ಘಟನೆ ಕೊಲ್ಲಮೊಗ್ರ ಗ್ರಾಮದ ತೋಟದಮಜಲು ಎಂಬಲ್ಲಿ ನಡೆದಿದೆ.


ಚೂರಿ ಇರಿತಕ್ಕೊಳಗಾದವರನ್ನು ತೋಟದಮಜಲು ನಿವಾಸಿ ಲೂಕೋಸ್ ಎಂದು ಗುರುತಿಸಲಾಗಿದೆ. ಇವರ ದೇಹದ 5 ಭಾಗದಲ್ಲಿ ಚೂರಿ ಇರಿತದಿಂದ ಗಾಯಗಳಾಗಿದ್ದು, ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸ್ಥಳೀಯರ ದೂರಿನಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top