ಕೆರೆಯಲ್ಲಿ ಮುಳುಗಿ ವ್ಯಕ್ತಿ ಮೃತ್ಯು ➤ 30 ಅಡಿಯಷ್ಟು ನೀರಿನಲ್ಲಿ ತಳಹಿಡಿದಿದ್ದ ಮೃತದೇಹ…!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು. 01. ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪಾಪುದಡ್ಕ ಎಂಬಲ್ಲಿ ನಡೆದಿದೆ.

ಮೃತರನ್ನು ಪಾಪುದಡ್ಕ ನಿವಾಸಿ ಲಕ್ಷ್ಮಣ ಗೌಡ ಎಂದು ಗುರುತಿಸಲಾಗಿದೆ. ಇವರು ಗುರುವಾರದಂದು ಸಂಜೆ ಹುಲ್ಲು ಕೊಯ್ಯಲೆಂದು ತೆರಳಿದವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸುಮಾರು 30 ಅಡಿಯಷ್ಟು ಕೆರೆಯ ನೀರಿನಲ್ಲಿ ತಳಹಿಡಿದಿದ್ದ ಮೃತದೇಹವನ್ನು ಶುಕ್ರವಾರ ಬೆಳಗ್ಗೆ ನುರಿತ ಈಜುಗಾರ ಮುಹಮ್ಮದ್ ಬಂದಾರು ಮೇಲಕ್ಕೆತ್ತಿದ್ದಾರೆ.

Scroll to Top