ಬುಲ್ಡೋಝರ್ ರಾಜಕೀಯವನ್ನು ನಿಲ್ಲಿಸಿ ➤ ಸರಕಾರಿ ಪ್ರಾಯೋಜಿತ ದಬ್ಬಾಳಿಕೆಯನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಪುತ್ತೂರು ವತಿಯಿಂದ ಭಿತ್ತಿಪತ್ರ ಪ್ರದರ್ಶನ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 14. ಸಂವಿಧಾನ ಬದ್ದ ಹಕ್ಕಾದ ಪ್ರತಿಭಟನೆಯನ್ನು ನಡೆಸಿದ ಜನಸಮುದಾಯದ ಮೇಲೆ ಸರಕಾರಿ ಪ್ರಾಯೋಜಿತವಾಗಿ ನಡೆಸುತ್ತಿರುವ ಬುಲ್ಡೋಜರ್ ರಾಜಕೀಯವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಕರೆ ನೀಡಿದ ಪ್ರತಿಭಟನೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ವತಿಯಿಂದ ಪುತ್ತೂರು ತಾಲೂಕಿನ ಕೊಂಬೆಟ್ಟು ಕಾಲೇಜು ಹಾಗೂ ಅಂಕತಡ್ಕದಲ್ಲಿ ಭಿತ್ತಿಪತ್ರ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಜೂನಿಯರ್ ಕಾಲೇಜು ಘಟಕದ ಅಧ್ಯಕ್ಷರಾದ ಫುರ್ಖಾನ್, ಕಾರ್ಯದರ್ಶಿ ಸುಹೈಲ್ ಕೊಡಿಪ್ಪಾಡಿ ಮತ್ತಿತರರು ಭಾಗವಹಿಸಿದ್ದರು.

Also Read  ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ► ಆಲಂಕಾರು ಶ್ರೀ ಭಾರತೀ ಶಾಲೆಯ ಕು.ಸ್ಫೂರ್ತಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

error: Content is protected !!
Scroll to Top