ಕೊಕ್ಕಡ: ಚರ್ಚ್ ಹಾಗೂ ಶಾಲೆಯ ಬೀಗಮುರಿದು ಒಳನುಗ್ಗಿದ ಕಳ್ಳರು..!! ➤ ಚರ್ಚ್ ನ ಕಾಣಿಕೆಡಬ್ಬಿಯ ಹಣ ಕಳವು

(ನ್ಯೂಸ್ ಕಡಬ) newskadaba.com ಕೊಕ್ಕಡ, ಜೂ. 11. ಚರ್ಚ್ ಹಾಗೂ ಶಾಲೆಯ ಬೀಗಮುರಿದು ಒಳನುಗ್ಗಿದ ಕಳ್ಳರು ಶಾಲಾ ಕೊಠಡಿಯೊಳಗಿನ ಕಪಾಟುಗಳನ್ನು ಒಡೆದು ಹುಡುಕಾಡಿ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ ಘಟನೆ ಕೊಕ್ಕಡ ಸಮೀಪದ ಕೌಕ್ರಾಡಿ ಎಂಬಲ್ಲಿ ನಡೆದಿದೆ.


ಕೌಕ್ರಾಡಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ 5 ಕೊಠಡಿಗಳ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಕೊಠಡಿಯೊಳಗಿದ್ದ ಕಪಾಟುಗಳನ್ನು ಹುಡುಕಾಡಿ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು, ಆದರೆ ಯಾವುದೇ ವಸ್ತು ಕಳ್ಳತನವಾಗಿಲ್ಲ ಎಂದೆನ್ನಲಾಗಿದೆ. ಚರ್ಚ್ ನ ಮುಂಭಾಗದಲ್ಲಿದ್ದ ಮೇರಿಮಾತೆಯ ಗ್ರೆಟ್ಟೋ ದ ಗೇಟಿನ ಬೀಗ ಮುರಿದ ಅಲ್ಲಿದ್ದ ಕಾಣಿಕೆ ಡಬ್ಬಿಯನ್ನು ಮುರಿದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Scroll to Top