ಬೆಳ್ಳಾರೆ: ರೆಡ್ ಮಿ ಮೊಬೈಲ್ ಸ್ಫೋಟ ➤ ಅದೃಷ್ಟವಶಾತ್ ಪಾರಾದ ಯುವತಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ. 03. ಇಲ್ಲಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳ ಮೊಬೈಲ್ ಸ್ಫೋಟಗೊಂಡು ಯುವತಿ ಅದೃಷ್ಟವಶಾತ್ ಪಾರಾದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.

ಇಲ್ಲಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯು ಎರಡು ವರ್ಷದ ಹಿಂದೆ ಆನ್ ಲೈನ್ ನಲ್ಲಿ ರೆಡ್ ಮಿ ನೋಟ್ 8 ಮೊಬೈಲ್ ಖರೀದಿಸಿದ್ದರು. ಎರಡು ದಿನಗಳ ಹಿಂದೆ ಮೊಬೈಲ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅದನ್ನು ಮೊಬೈಲ್ ಶಾಪ್ ಒಂದರಲ್ಲಿ ರಿಪೇರಿ ಮಾಡಿಸಿಕೊಂಡಿದ್ದರು. ಗುರುವಾರದಂದು ಮಧ್ಯಾಹ್ನ ಯುವತಿಯು ಹೋಟೆಲ್ ಗೆ ಊಟಕ್ಕೆಂದು ತೆರಳಿದ್ದು, ಈ ವೇಳೆ ಮೊಬೈಲ್ ನ್ನು ಟೇಬಲ್ ಮೇಲಿಟ್ಟು ಗೆಳತಿಯರೊಂದಿಗೆ ಮಾತನಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಮೊಬೈಲ್ ಸ್ಫೋಟವಾಗಿ, ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಹೋಟೆಲ್ ಮಾಲೀಕ ವಸಂತ್ ಅವರು ಟೇಬಲ್ ನಿಂದ ಮೊಬೈಲ್ ನ್ನು ಕೆಳಕ್ಕೆ ತಳ್ಳಿದ್ದು, ಅಷ್ಟರಲ್ಲಾಗಲೇ ಫ್ಲೈವುಡ್ ಟೇಬಲ್ ಸ್ವಲ್ಪ ಸುಟ್ಟು ಹೋಗಿದೆ ಎನ್ನಲಾಗಿದೆ. ಯುವತಿ ಮೊಬೈಲ್ ಬಳಕೆ ಮಾಡದೇ ಇದ್ದದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

Also Read  ಮಧ್ಯರಾತ್ರಿಯಲ್ಲಿ ವಾಹನ ಚಲಾಯಿಸುವಾಗ ಭಯ ಹುಟ್ಟಿಸುತ್ತಾನೆ….ಈ ವ್ಯಕ್ತಿ!!!              

error: Content is protected !!
Scroll to Top