ಹೆದ್ದಾರಿ ಬದಿ ಜೊತೆಗಿದ್ದ ಮುಸ್ಲಿಂ ಯುವಕ – ಹಿಂದೂ ಯುವತಿಗೆ ಹಲ್ಲೆ ಪ್ರಕರಣ ➤ ಕಡಬದ ಇಬ್ಬರ ಬಂಧನ



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಎ.05. ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇರೆಗೆ ಉಪ್ಪಿನಂಗಡಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡ ಘಟನೆ ಮಂಗಳವಾರದಂದು ಗುಂಡ್ಯದಿಂದ‌ ವರದಿಯಾಗಿದೆ.







ಪುತ್ತೂರು ಸಂಪ್ಯ ನಿವಾಸಿ ನಝೀರ್(21) ಎಂಬಾತ ತನ್ನ ಪ್ರಿಯತಮೆ ಪೂಜಾ ಎಂಬಾಕೆಯನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್ ಹಾಗೂ ಇತರರು ಆಟೋರಿಕ್ಷಾವನ್ನು ತಡೆದು ಯದ್ವಾತದ್ವಾ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದನು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಉಪ್ಪಿನಂಗಡಿ ಪೊಲೀಸರು ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ಅನಿಲ ನಿವಾಸಿ ಬಾಲಚಂದ್ರ(35) ಹಾಗೂ ದೇರಣೆ ನಿವಾಸಿ ರಂಜಿತ್(31) ಎಂಬವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.






 

 

error: Content is protected !!
Scroll to Top