ಕಡಬ: ಮರದಿಂದ ಬಿದ್ದು ಬಾಲಕ ಮೃತ್ಯು..!!!



(ನ್ಯೂಸ್ ಕಡಬ) newskadaba.com ಕಡಬ, ಮಾ. 18. ಮರದಿಂದ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ತಾಲೂಕಿನ ದೋಳ್ಪಾಡಿ ಗ್ರಾಮದ ಮರಕ್ಕಡ ಎಂಬಲ್ಲಿ ನಡೆದಿದೆ.







ಮೃತ ಬಾಲಕನನ್ನು ಮರಕ್ಕಡ ನಿವಾಸಿ ದಿವಾಕರ ಎಂಬವರ ಮಗ ಉಲ್ಲಾಸ್ (9) ಎಂದು ಗುರುತಿಸಲಾಗಿದೆ. 3ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಈತ ಎಂದಿನಂತೆ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದು ಮನೆಯ ಹತ್ತಿರದ ವಠಾರದಲ್ಲಿದ್ದ ಪೇರಳೆ ಮರಕ್ಕೆ ಹತ್ತಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ, ಅದಾಗಲೇ ಬಾಲಕ ಮೃತಪಟ್ಟಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.






error: Content is protected !!
Scroll to Top