(ನ್ಯೂಸ್ ಕಡಬ) newskadaba.com ಕಡಬ, ನ.08. ಇಲ್ಲಿನ ಮರ್ಧಾಳ ಸಮೀಪದ ಚಾಕಟೆಕರೆ ಎಂಬಲ್ಲಿ ಮದ್ಯದಂಗಡಿ ತೆರೆಯಲಾಗುತ್ತಿದ್ದು ಅದನ್ನು ವಿರೋಧಿಸಿ ಮರ್ಧಾಳ ಪರಿಸರದ ನಾಗರೀಕರು ಸಭೆ ಸೇರಿ ಮುಂದಿನ ಹೆಜ್ಜೆಯ ಬಗ್ಗೆ ಮಾತುಕತೆ ನಡೆಸಲಾಯಿತು.
ಮರ್ಧಾಳ ಗ್ರಾಮದಲ್ಲಿ ಇಷ್ಟರವರೆಗೆ ಮದ್ಯದಂಗಡಿ ಇಲ್ಲದೆ ಇರುವಾಗ ಇದೀಗ ಹಠಾತ್ತಾಗಿ ಮದ್ಯದಂಗಡಿಯನ್ನು ಪ್ರಾರಂಭಿಸುವುದು ಸರಿಯಲ್ಲ. ಎಲ್ಲರೂ ಕಾನೂನು ಮೂಲಕ ಹೋರಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎ.ಬಿ.ಮನೋಹರ ರೈ, ಮರ್ಧಾಳ ಗ್ರಾ.ಪಂ. ಸದಸ್ಯ ಹರೀಶ್ ಕೋಡಂದೂರು, ಪ್ರಮುಖರಾದ ವಾಸುದೇವ ಬೈಪಾಡಿತ್ತಾಯ, ಗಣೇಶ್, ದೀಕ್ಷಿತ್, ವಿಜಿತ್, ಹೈದರ್ ಮೊದಲಾದವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.