ವಿಟ್ಲ: ಅತ್ತಿಗೆಯ ಮಾನಭಂಗಕ್ಕೆ ಯತ್ನಿಸಿದ ಮೈದುನ..! ➤ ಆರೋಪಿ ವಿರುದ್ದ FIR ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಮಾ. 03. ಮೈದುನನೋರ್ವ ತನ್ನ ಅತ್ತಿಗೆಯ ಕೈಹಿಡಿದೆಳೆದು ಆಕೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ವೀರಕಂಬ ಎಂಬಲ್ಲಿ ನಡೆದಿದೆ.


ಆರೋಪಿಯು ಮಹಿಳೆಯ ಗಂಡನ ದೊಡ್ಡಪ್ಪನ ಮಗನಾಗಿದ್ದು, ಮಹಿಳೆಯ ಮನೆಯ ಹತ್ತಿರದ ಮನೆಯಲ್ಲೇ ವಾಸವಾಗಿದ್ದ. ಮಹಿಳೆಯ ಗಂಡ ಫೆ.‌25ರಂದು ದನಕ್ಕೆ ಸೊಪ್ಪು ತರಲೆಂದು ಗುಡ್ಡಕ್ಕೆ ಹೋಗಿದ್ದು, ಸ್ವಲ್ಪ ಸಮಯದ ಬಳಿಕ ಮಹಿಳೆಯೂ ಮನೆಕೆಲಸ ಮುಗಿಸಿಕೊಂಡು ಹೋಗಿ ಗಂಡ ಕತ್ತರಿಸಿದ್ದ ಸೊಪ್ಪನ್ನು ತರುತ್ತಿದ್ದ ವೇಳೆ ಗುಡ್ಡದಲ್ಲಿ ಅಡ್ಡಗಟ್ಟಿದ ಜನಾರ್ಧನ ಕೈಹಿಡಿದು ಎಳೆದು, ಒಂದು ಕೈಯಿಂದ ಬಾಯಿಯನ್ನು ಮುಚ್ಚಿ ಮಾನಭಂಗ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆಯು ಆತನಿಂದ ಬಿಡಿಸಿಕೊಂಡು ಗಂಡನನ್ನು ಕರೆದಾಗ, ಮಹಿಳೆಯ ಗಂಡ ಮತ್ತು ಇತರರು ಬರುವುದನ್ನು ನೋಡಿ ನೀನು ನನಗೆ ಸಿಗದಿದ್ದರೆ ನಿನ್ನನ್ನು ಮುಂದೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Also Read  ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ➤ ಪಲ್ಟಿ ಹೊಡೆದು ನೆಲಕ್ಕೆ ಅಪ್ಪಳಿಸಿದ ಬೈಕ್ ಸವಾರ...!

error: Content is protected !!
Scroll to Top