ಪ್ರತಿಭಟನಾ ನಿರತ ಆಸಿಫ್ ಆಪತ್ಬಾಂಧವನ ಮೇಲೆ ಮಂಗಳಮುಖಿಯರಿಂದ ಹಲ್ಲೆ ಯತ್ನ..!

(ನ್ಯೂಸ್ ಕಡಬ) newskadaba.com ಸುರತ್ಕಲ್, ಫೆ. 16. ಇಲ್ಲಿನ ಎನ್ಐಟಿಕೆ ಬಳಿಯಿರುವ ಟೋಲ್ ಗೇಟ್ ವಿರುದ್ದ ಕಳೆದ ಕೆಲವು ದಿನಗಳಿಂದ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಆಸಿಫ್ ಆಪತ್ಬಾಂಧವನ ಮೇಲೆ ಮಂಗಳಮುಖಿಯರು ಹಲ್ಲೆಗೆ ಯತ್ನಿಸಿರುವುದಾಗಿ ವರದಿಯಾಗಿದೆ.

ಮಂಗಳವಾರ ಮಧ್ಯರಾತ್ರಿ ಸುಮಾರು 12:30ರ ವೇಳೆಗೆ ಮೊದಲು ಇಬ್ಬರು ಮಂಗಳಮುಖಿಯರು ಬಳಿಕ ಮಂಗಳಮುಖಿಯರ ತಂಡವೇ ಆಗಮಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆಗೆ ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ಕೂಡಲೇ ಆಸಿಫ್ ಆಪತ್ಬಾಂಧವ ಫೇಸ್ಬುಕ್ ಲೈವ್ ಮಾಡಿದ್ದಾರೆ. ತಂಡದಲ್ಲಿದ್ದ ಹಲವು ಮಂಗಳಮುಖಿಯರು ಬಟ್ಟೆ ಎತ್ತಿ ನರ್ತನ ಪ್ರಾರಂಭಿಸಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ‌ .

Also Read  ಕೈ ಕಳೆದುಕೊಂಡು ಅಸಾಯಕನಾಗಿರುವ ರವಿಚಂದ್ರ ಸಹಾಯಕ್ಕೆ ಮನವಿ

error: Content is protected !!
Scroll to Top