(ನ್ಯೂಸ್ ಕಡಬ) newskadaba.com ಫೆ. 15. ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಮಿತಿಯಿಂದ ಗಾನ ಕೋಗಿಲೆ ಭಾರತ ರತ್ನ ಲತಾ ಮಂಗೇಶ್ಕರ್ ಹಾಗೂ ಭಾವೈಕ್ಯತೆಯ ಹರಿಕಾರ ಹಿರಿಯ ವಚನಕಾರರಾದ ಪದ್ಮಶ್ರೀ ಇಬ್ರಾಹಿಂ ಸುತಾರ ಅವರಿಗೆ ನುಡಿ ನಮನ ಕಾರ್ಯಕ್ರಮನ್ನು ಗೂಗಲ್ ಮೀಟ್ ನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಹಾಶಿಂ ಬನ್ನೂರು ವಹಿಸಿದ್ದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಅರವಂಟಿಗೆ ಪಾಕ್ಷಿಕ ಪತ್ರಿಕೆ ಸಂಪಾದಕರು ಕೆ.ಎಂ ಅನಂತಕೀರ್ತಿ ಕೋಲಾರ, ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಗಿರಿಜಾ ಮಾಲಿ ಪಾಟೀಲ, ಸಮಾಜ ಸೇವಕರು ಹಾಗೂ ಸಾಮಾಜಿಕ ಚಿಂತಕರೂ ಶ್ರೀ ರಿಯಾಜ್ ಪಾಶಾ ಕೊಳ್ಳೂರ ಹಾಗೂ ವಿನಯವಾಣಿ ಕನ್ನಡ ದಿನ ಪತ್ರಿಕೆ ಕೊಪ್ಪಳ ಉಪ ಸಂಪಾದಕರಾದ ಶ್ರೀ ವೈ.ಎಂ.ಕೋಲಕಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಭಾಗವಹಿಸಿದ ಕವಿಗಳು ಹಾಗೂ ಗಾಯಕ – ಗಾಯಕಿಯರು ಲತಾ ಮಂಗೇಶ್ಕರ್ ಹಾಗೂ ಇಬ್ರಾಹಿಂ ಸುತಾರ ಅವರ ಬಗ್ಗೆ ಹಾಡು ಮತ್ತು ಕವನ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಬೆಂಗಳೂರು ಸ್ವಾಗತಿಸಿ, ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಅಮೀರ್ ಬನ್ನೂರು ನಿರೂಪಣೆ ಹಾಗೂ ವಂದಿಸಿದರು ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.