ನೆಲ್ಯಾಡಿ: ಜೀಪು ಪಲ್ಟಿ ➤ ಮಕ್ಕಳ ಸಹಿತ ಏಳು ಮಂದಿಗೆ ಗಾಯ..!

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ. 15. ಚಾಲಕನ ನಿಯಂತ್ರಣ ತಪ್ಪಿ ಜೀಪು ಪಲ್ಟಿಯಾದ ಪರಿಣಾಮ ಪ್ರಯಾಣಿಕರು ಗಾಯಗೊಂಡ ಘಟನೆ ಅರಸಿನಮಕ್ಕಿ ಸಮೀಪದ ಪುತ್ತಿಗೆ ಎಂಬಲ್ಲಿ ನಡೆದಿದೆ.


ಮರ್ಧಾಳ ಕೊಣಾಜೆಯಿಂದ ಕೊಕ್ಕಡದಲ್ಲಿ ನಡೆಯುತ್ತಿದ್ದ ನೇಮಕ್ಕೆಂದು ಜೀಪಿನಲ್ಲಿ ತೆರಳುತ್ತಿದ್ದ ವೇಳೆ ಪುತ್ತಿಗೆ ತಲುಪುತ್ತಿದ್ದಂತೆಯೇ ಚಾಲಕನ ಹತೋಟಿ ತಪ್ಪಿ ಜೀಪು ಪಲ್ಟಿಯಾಗಿದೆ. ಪರಿಣಾಮ ಮೂವರು ಮಕ್ಕಳು, ವೃದ್ದೆ ಸಹಿತ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Scroll to Top