ಕರಾವಳಿಯಲ್ಲಿ ಮತ್ತೆ ತಲವಾರು ದಾಳಿ ➤ ಯುವಕನಿಗೆ ಮಾರಣಾಂತಿಕ ಹಲ್ಲೆ- ಪರಿಚಯಸ್ಥರಿಂದಲೇ ಕೃತ್ಯ…!

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 02. ಯುವಕನ ಮೇಲೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಯುವಕ ಗಂಭೀರ ಗಾಯಗೊಂಡ ಘಟನೆ ಕಾಟಿಪಳ್ಳ ಆರನೇ ಬ್ಲಾಕ್ ನಲ್ಲಿ ಮಂಗಳವಾರದಂದು ತಡರಾತ್ರಿ ಸಂಭವಿಸಿದೆ.

ಹಲ್ಲೆಗೀಡಾದ ಯುವಕನನ್ನು ಕಾಟಿಪಳ್ಳ ಎರಡನೇ ಬ್ಲಾಕ್ ನಿವಾಸಿ ಮುಹಮ್ಮದ್ ಅನಸ್ ಎಂದು ಗುರುತಿಸಲಾಗಿದೆ. ಈತ ಮಂಗಳವಾರದಂದು ರಾತ್ರಿ 11:30ರ ವೇಳೆಗೆ ಬಾಡಿಗೆ ವಿಚಾರದಲ್ಲಿ ಮಾತನಾಡುವ ಸಲುವಾಗಿ 6ನೇ ಬ್ಲಾಕ್ ನಲ್ಲಿರುವ ಅಬೂಬಕ್ಕರ್ ಎಂಬವರ ಮನೆಗೆ ತೆರಳಿ ಮನೆಯ ಹೊರಗಡೆ ನಿಂತು ಮಾತನಾಡುತ್ತಿದ್ದಾಗ ಬ್ರಿಝಾ ಕಾರಿನಲ್ಲಿ ಬಂದ ರವೂಫ್, ಚಾರು ಮತ್ತಿತರರು ಅವಾಚ್ಯ ಶಬ್ದಗಳಿಂದ ಬೈದಿದಲ್ಲದೇ ತಲವಾರಿನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ಸಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಅನಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಚಾರು , ರವೂಫ್, ಅಕ್ಕಿ, ಮುಸ್ತಫಾ ಮೊದಲಾದವರ ವಿರುದ್ದ ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

Also Read  ಕಳವಾದ ಮೊಬೈಲ್‌ಫೋನ್ ವಾರಸುದಾರರಿಗೆ ಒಪ್ಪಿಸುವಲ್ಲಿ ಕರ್ನಾಟಕ ಪೊಲೀಸರೇ ಪ್ರಥಮ

error: Content is protected !!
Scroll to Top