ಸುಳ್ಯ: ಹೊಳೆಯಲ್ಲಿ ಮುಳುಗಿ ಆರರ ಬಾಲಕ ಮೃತ್ಯು…!



(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 02. ನದಿಯಲ್ಲಿ ಮುಳುಗಿ ಆರು ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಪೈಚಾರು ದೊಡ್ಡೇರಿ ಎಂಬಲ್ಲಿ ನಡೆದಿದೆ.







ಮೃತ ಯುವಕನನ್ನು ಆಂಧ್ರ ಮೂಲದ ಕುಪ್ಪರಾ ಎಂದು ಗುರುತಿಸಲಾಗಿದೆ. ಈತನ ಕುಟುಂಬವು ಸುಳ್ಯದ ಪೈಚಾರು ಬಳಿ ಬುಟ್ಟಿ ಹೆಣೆಯುವ ಕೆಲಸ ಮಾಡಿಕೊಂಡು ಅಲ್ಲೇ ಡೇರೆ ಕಟ್ಟಿ ವಾಸಿಸುತ್ತಿದ್ದು, ಇವರ ಪೈಕಿ ಕೆಲವು ಮಕ್ಕಳು ಹಾಗೂ ಹಿರಿಯರು ಸ್ನಾನಕ್ಕೆಂದು ನದಿಗಿಳಿದಿದ್ದಾರೆ. ಈ ಸಂದರ್ಭ ಕುಪ್ಪರಾ ಎಂಬ ಮಗು ಕಾಣೆಯಾಗಿದ್ದು, ಹುಡುಕಾಡಿದಾಗ ಹೊಳೆಯಲ್ಲಿ ಮೃತದೇಹ ಲಭಿಸಿದೆ ಎನ್ನಲಾಗಿದೆ.






error: Content is protected !!
Scroll to Top