ಬೆಳ್ಳಾರೆ: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ➤ ಆರೋಪಿ ಅಂದರ್- ಫೋಕ್ಸೋ ಕೇಸ್ ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಜ. 32. ಬಾಲಕಿಯೋರ್ವಳು ಮನೆಯಲ್ಲೇ ಒಬ್ಬಳೆ ಇದ್ದ ಸಂದರ್ಭ ಮನೆಗೆ ಬಂದ ಯುವಕನೋರ್ವ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ತಾಲೂಕಿನ ಪೆರುವಾಜೆ ಗ್ರಾಮದಲ್ಲಿ ನಡೆದಿದೆ.

ಆರೋಪಿ ಪೆರುವಾಜೆಯ ದೀಕ್ಷಿತ್ ಪೀಚೆ ಎಂದು ಗುರುತಿಸಲಾಗಿದೆ. ಈತ ಬಾಲಕಿಯನ್ನು ತಬ್ಬಿ ಹಿಡಿದು ಮುಖಕ್ಕೆ ಚುಂಬಿಸಿ ದೌರ್ಜನ್ಯವೆಸಗಿರುವುದಾಗಿ ಬಾಲಕಿಯ ತಾಯಿಯು ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಿದ ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದೆ.

 

 

 

error: Content is protected !!

Join the Group

Join WhatsApp Group